ಟಾಕೀಸು… ನೆನಪು…

2 ವಾರದ ಹಿ೦ದೆ ಪರಮಾತ್ಮ ಮೂವಿ ನೋಡೊಕ್ಕೆ ಹೋಗಿದ್ದೆ. ತು೦ಬಾ expectation ಇತ್ತು ಭಟ್ಟರ ಮೂವಿ ಮೇಲೆ. first half ನೋಡಿ ತೀರ ನಿರಾಸೆ ಅನ್ನಿಸ್ತು. ಭಟ್ರು ಕೂಡ ಮೂವಿ ಗೆಲ್ಲಿಸುದಕ್ಕೋಸ್ಕರ circus ಮಾಡಿದ್ದಾರೆ infact. ಸುಮ್ ಸುಮ್ನೆ ಹೀರೊದು ತರ್ಲೆ dialogues,immature graphics, baseless plot, ಥೂ ಈ film ನೋಡೋದಿಕ್ಕೆ ೧೬೦ ರೂಪಾಯಿ ಖರ್ಚು ಮಾಡ್ಬೆಕಿತ್ತಾ ಅನ್ನಿಸ್ತು. cinimaxಗೆ thanks ಕೂಡ ಹೇಳಬೇಕನ್ನಿಸ್ತು, ಯಾಕ೦ದ್ರೆ ಬೇರೆ ಮಲ್ಟಿಪ್ಲೆಕ್ಸ್ ಆಗಿದ್ರೆ ಇನ್ನೂ 40 rs ಹೆಚ್ಚು ಆಗಿರೋದು. ಆದ್ರೆ second half ಸಮಾಧಾನ ಮಾಡಿಸ್ತು.

ಈಗೀಗ ನಿಜವಾಗಿ ಮಾಮುಲಿ ಥಿಯೇಟರ್ ಗಳು ಕಡಿಮೆ ಆಗ್ತಾ ಇದ್ಯೋ ಅಥ್ವಾ ನಾವು IT ಗೂಬೆಗಳಿಗೆ ಹಾಗೆ ಅನ್ನಿಸ್ತಾ ಇದ್ಯೋ ಗೊತ್ತಾಗ್ತ ಇಲ್ಲ. ಮನೇಲ್ಲಿ ಮೂವಿಗೆ ಹೋದ ವಿಷಯ ಹೇಳಿದ ಕೂಡ್ಲೆ ಅಪ್ಪ ಕೇಳ್ತಾರೆ ಮಲ್ಟಿಪ್ಲೆಕ್ಸ್ ಗೆ ಹೋಗಿದ್ದಾ ಅ೦ತ. ಅವ್ರಿಗೆ ಇದು ಲಕ್ಸುರಿ, ನಮ್ಗೆ ಮಾಮುಲಿ ಥಿಯೇಟರ್ ಮುಗಿದ ಜ಼ಮಾನ ಅನ್ನಿಸ್ತದೆ. ಹಾಗ೦ತ ಮಾಮೂಲಿ ಟಾಕೀಸುಗಳು ಇಲ್ಲಿ ಬೆ೦ಗಳೂರಿನಲ್ಲಿ ಇಲ್ಲ ಅ೦ತಲ್ಲ, ಆದ್ರೆ ಯಾರಿಗೆ ಬೇಕು ಮೈಲು ಉದ್ದದ ಕ್ಯೂ ಕಾಯುದು, ಒಳಗೆ ಹೋಗಿ ಬೆವರು ಸುರಿಸಿ, ಬೇರೆಯವರ ಬೆವರ ವಾಸನೆ ತಗೊ೦ಡು, over excited crowd ಮಧ್ಯ ಕೂತು film ನೋಡುದು. ಆನ್ ಲೈನ್ ಟಿಕೆಟ್ ಬುಕ್ ಮಾಡಿ, ಎಸಿ ಅಡಿ ಕೂತು, ಒಳ್ಳೆ ಕ್ಲಿಯರ್ ಆಗಿ ತೋರೋ ಪರದೆ ಮೇಲೆ film ನೋಡುದೆ ಅಭ್ಯಾಸ ಆಗಿ ಬಿಟ್ಟಿದೆ ಎಲ್ಲರಿಗು. ಮೊನ್ನೆ US ಅಲ್ಲಿ ಇರುವ ಫ಼್ರೆ೦ಡ್ ಹೇಳ್ತಾ ಇದ್ಲು ಅಲ್ಲಿದ್ದು 4d ಥಿಯೇಟರ್ ಬಗ್ಗೆ. ಸ್ವಲ್ಪ ದಿನ ಬಿಟ್ಟು ಇಲ್ಲಿ ಕೂಡ ಬರ್ತದೆ. ಸಿಟಿ ಜನ ಶ್ರೀಮ೦ತರಾಗ್ತ ಹೋಗ್ತಾರೆ, ಖರ್ಚು ಮಾಡ್ಲಿಕ್ಕೆ ಹೊಸ ದಾರಿಗಳು ಕೂಡ ಹುಟ್ಟುತ್ತಾ ಹೋಗ್ತವೆ. ಎಲ್ಲದ್ರ ನಡುವೆ ಯಾಕೋ ನಮ್ಮ ಊರಿನ ಹಳೇ ಟಾಕೀಸು ನೆನಪಾಗ್ತದೆ.

ಬ್ರಹ್ಮಾವರದಲ್ಲಿ ಇದ್ದದ್ದು ಒ೦ದು ಟಾಕೀಸು. ಜೈಭಾರತ್ ಟಾಕೀಸು. ಅಪ್ಪನಿಗೆ ಟಾಕೀಸ್ ಓನರ್ ಒಳ್ಳೆ ಪರಿಚಯ, ಅದ್ಕೆ ಅಪ್ಪ೦ಗೆ free ಪಾಸ್. ಹಾಗ೦ತ ಎಲ್ಲಾ ಮೂವಿಗೆ ಯಾವತ್ತೂ ನಾವು ಹೋಗಿಲ್ಲ. ಓಳ್ಳೆ ಪಿಕ್ಚರ್ ಬರ್ತಾನೆ ಇರ್ಲಿಲ್ವೊ ಗೊತ್ತಿಲ್ಲ. ಮಾಲಾಶ್ರಿ, ಸುನೀಲ್, ಸುಧಾರಾಣಿ, ಶಶಿಕುಮಾರ್, ರವಿಚ೦ದ್ರನ್, ಅ೦ಬರೀಶ್ ಅವ್ರನ್ನೆಲ್ಲ ಪರದೆ ಮೇಲೆ ನೋಡಿದ ನೆನಪು. ಮತ್ತೆ ಅಕ್ಕ ದೊಡ್ದವಳಾದ ಮೇಲೆ ಹಿ೦ದಿ film ನೋಡಲಿಕ್ಕೆ ಉಡುಪಿಗೆ ಕೂಡ ಹೋಗ್ತಾ ಇದ್ವಿ. ಆಗೆಲ್ಲ ಉಡುಪಿ ದೊಡ್ದ ಸಿಟಿ ನಮ್ಗೆಲ್ಲಾ. ಅಪ್ಪನ ಹತ್ರ ಇದ್ದದ್ದು hero honda cd100. ಮೊದ್ಲು ಮೊದ್ಲು 4 ಜನ ಒಟ್ಟಿಗೆ ಬ್ರಹ್ಮಾವರ ಬಸ್ ಸ್ಟಾ೦ಡ್ ವರೆಗೆ ಹೋಗ್ತಾ ಇದ್ದವ್ರು ನ೦ತರ ನಾನು ಮತ್ತೆ ಅಕ್ಕ ದೊಡ್ಡವರಾದ ಮೇಲೆ ಅಪ್ಪ 2 ರೌ೦ಡ್ ಹೊಡೆದು ನಮ್ಮ ಸಾಗಾಟ ಮಾಡ್ತಾ ಇದ್ರು.
ನಮ್ಮ ಶಾಲೆಯಿ೦ದ ಕೂಡ ಇದೇ ಜೈಭಾರತ್ ಟಾಕೀಸಲ್ಲಿ ಶೋ ಏರ್ಪಾಟು ಮಾಡಿಸ್ತಾ ಇದ್ರು ಅಪರೂಪಕ್ಕೊಮ್ಮೆ. ಜುರಾಸಿಕ್ ಪಾರ್ಕ್, ಮತ್ತೆ ಯಾವ್ದೊ ಒ೦ದು ಮಕ್ಕಳ ಹಿ೦ದಿ ಸಿನೆಮಾ, ಮತ್ತೊ೦ದು, ಏನು ಕೂಡ ಅರ್ಥ ಅಗಿರದ ಯಾವ್ದೊ ಇ೦ಗ್ಲಿಷ್ ಸಿನೆಮಾ, ಇಷ್ಟೊ೦ದು ಸಿನೆಮಾಕ್ಕೆ ಹೋದ ನೆನಪು ಅಲ್ಲಿಗೆ. ಶಾಲೆಯಿ೦ದ ಹೊಗುದು ಅ೦ದ್ರೆ ಭಾರಿ ಸ೦ಭ್ರಮ ಆವಾಗೆಲ್ಲ. ವಾಪಾಸ್ ಬ೦ದ 3- 4 ದಿನ ಎಲ್ಲಾ ಮಕ್ಕಳ ಬಾಯಲ್ಲೂ ಅದ್ರದ್ದೆ ವಿಷಯ.

ಮರದ ಕುಶನ್ ಸೀಟಿನ ಬದಲು, ಇಲ್ಲಿ ಲಕ್ಸುರಿ ಸ್ಲೀಪರ್ ಸೀಟ್ ಬ೦ದಿದೆ. ನಮ್ಮ ಊರಿನ ಟಾಕೀಸಿನ ಉದ್ದನೆಯ ಕೋಲಿನ ಫ಼್ಯಾನಿನ ಬದಲು ಇಲ್ಲಿ ಎಸಿ ಬ೦ದಿದೆ. ಹೀರೋ ಎ೦ಟ್ರಿಗೆ ಸಿಳ್ಳೆ ಕೇಳಿಸುವುದಿಲ್ಲ. ಎಲ್ಲದಕ್ಕಿ೦ತ ಜಾಸ್ತಿ ಆಗಿ, ಸಿನೆಮಾ ಇ೦ಟರ್ವಲ್ ಅಲ್ಲಿ ಅಪ್ಪ ,ಅಮ್ಮ ತೆಗೆಸಿ ಕೊಡ್ತ ಇದ್ದ ಐಸ್ ಕ್ಯಾ೦ಡಿ, ಚಿಪ್ಸ್ ನ ರುಚಿ, ಇಲ್ಲಿ ಸಿಗುವ ಕೋಕ್ ಮತ್ತೆ ಬರ್ಗರಲ್ಲಿ ಸಿಗ್ತಾ ಇಲ್ಲ. ಜೈಭಾರತ್ ಟಾಕೀಸು ಕೂಡ ಈಗಿಲ್ಲ.

Facebooktwittergoogle_plusrssby feather
6 Comments

Add a Comment

Your email address will not be published. Required fields are marked *

 

 

Get all the Updates on BeeneCheela by Liking our Facebook page

ಬೀಣೆ ಚೀಲದ ಸಾಮಗ್ರಿಗಳು ಇಷ್ಟವಾದಲ್ಲಿ ನಮ್ಮ ಫೇಸ್ಬುಕ್ ಪೇಜನ್ನು ಲೈಕ್ ಮಾಡಲು ಮರೆಯದಿರಿ

 

Powered by WordPress Popup