ಚಿಕ್ಕಂದಿನಲ್ಲಿ, ನಮ್ಮ ದೇಶದ ಬಗ್ಗೆ ಅಭಿಮಾನ ಮೂಡಿಸುವ ಪಾಠಗಳ ಅಧ್ಯಾಯಗಳಲ್ಲಿ, ನಮ್ಮ ದೇಶ ಬೇರೆ ದೇಶಗಳಿಗಿಂತ ಏಕೆ ವಿಭಿನ್ನ ಎಂಬ ವಿಷಯ ಬಂದಾಗ ಮೊದಲು ಬಿಂಬಿಸುತ್ತಿದ್ದ ವಿಚಾರವೆಂದರೆ, ನಮ್ಮಲ್ಲಿರುವ ವೈವಿಧ್ಯತೆಗಳ ನಡುವೆಯೂ ದೇಶ ಏಕತೆಯಿಂದ ಹೇಗೆ ಮುನ್ನಡೆಯುತ್ತಿದೆ ಎಂಬುವುದು.