YouTube ನಲ್ಲಿ ಒಂದು ವಿಷಯ ಹುಡುಕಲು ಹೋಗಿ ಇನ್ನ್ಯಾವುದೋ ಸಿಕ್ಕಿ ಕೂತಲ್ಲಿಯೇ ಒಂದೆರಡು ಗಂಟೆ ಕರಗುವ ಅನುಭವ ಎಲ್ಲರಿಗೂ ಇರಬಹುದು. ಅಂಥದ್ದೇ ಒಂದು ಸಂದರ್ಭದಲ್ಲಿ, ಕನ್ನಡದ ಪ್ರಭಾವಿ ಲೇಖಕರ, ಸಂಪನ್ಮೂಲ ವ್ಯಕ್ತಿಗಳ ಸಂದರ್ಶನ ಹುಡುಕಲು ಹೋದಾಗ ಶತಾವಧಾನಿ ಆರ್.
ಒಂದು ಕಥೆ ಹೇಗಿರಬೇಕು? ಹೋಟೆಲಿನಲ್ಲಿ ಸುಮ್ಮನೆ ಕುಳಿತು order ಮಾಡಿದಾಗ ಸಿಗುವ ಸಿದ್ಧಪಡಿಸಿಟ್ಟಿದ್ದ ಊಟದಂತೆಯೇ? ಅಥವಾ ಪರಿಕರಗಳನ್ನೆಲ್ಲ ನಮ್ಮ ಮುಂದಿರಿಸಿ ನಮಗಿಷ್ಟವಾದದ್ದನ್ನು ತಯಾರಿಸುವ ಸ್ವಾತಂತ್ರ್ಯ ಕೊಡುವ, ಅಡುಗೆಯನ್ನು ತಯಾರಿಸುವಾಗ ಸಕ್ರಿಯವಾಗಿ ಭಾಗವಹಿಸಿ, ಉಪ್ಪು, ಹುಳಿ, ಖಾರವನ್ನು ನಮ್ಮ ರುಚಿಗೆ
ಕನ್ನಡದ ‘ತಿಥಿ’ ಚಲನಚಿತ್ರದ ನಂತರ ಮನಸ್ಸಿನಲ್ಲಿ ತೀವ್ರವಾಗಿ ಉಳಿದಂಥ ಮಲಯಾಳಂ ಭಾಷೆ ಚಿತ್ರ : Nanpakal Nerathu Mayakkam (ಮಧ್ಯಾಹ್ನದ ಕನಸಿನಂತೆ). ಹೆಸರು ಬಲು ಕ್ಲಿಷ್ಟಕರ. ಹಾಗೆಯೇ ಚಿತ್ರದ ಕಥೆಯ ಗ್ರಹಿಕೆಯು ಕೂಡ. ಬರಿ ಚಲನಚಿತ್ರವೆಂದರೆ ತಪ್ಪಾದೀತು. ಮತ್ತೆ
ಯಕ್ಷಗಾನವೆಂಬುದು ಒಂದು ಅನುಭವ. ಅಬ್ಬರವಲ್ಲ.ಯಕ್ಷಗಾನದಂತಹ ಪ್ರಾಂತ್ಯೀಯ ಕಲೆಗಳಿಗೆ ಜೀವ ನೀಡುವುದು ಅವುಗಳ ಸಾತ್ವಿಕ, ಮೂಲಭೂತ ಶೈಲಿ.ಜಾನಪದ ಎಂಬುದು ಯಾವತ್ತೂ , ಆ ಕಲೆಯು ಪ್ರಚಲಿತವಾಗಿರುವ ಪ್ರದೇಶದ ಜನರ ಸಾಂಸ್ಕೃತಿಕ ರುಚಿಯ ಪ್ರತಿಬಿಂಬವಾಗಿರುತ್ತದೆ.ಪ್ರಾದೇಶಿಕ ಕಲೆಯನ್ನು ಪ್ರಚಾರಪಡಿಸುವ ಉದ್ದೇಶವೆಂದು ಸಾರಿ, ಅದರ
‘ದೋಣಿ’ ನನ್ನ ದೇಹ. ಪ್ರಜ್ಞೆ, ಅದ ಹತ್ತಿ ಕುಳಿತ ‘ಪ್ರಯಾಣಿಕ’.ಆ ತುದಿಯಲ್ಲಿ, ಅಂಬಿಗನಂತೆ ಕುಳಿತಿರುವ, ಅಸ್ಪಷ್ಟವಾದ ಆಕೃತಿಯನ್ನೇ ದೇವರೆಂದು ನಂಬಿ ಈ ಪ್ರಯಾಣ ಪ್ರಾರಂಭವಾಗಿತ್ತು.. ಅಂಬಿಗನ ಮೇಲೆ ಅಚಲವಾದ ನಂಬಿಕೆಯೇನೋ ಇತ್ತು. ಅಲೆಗಳು ಸಣ್ಣಗಿದ್ದವೋ? ಅಂಬಿಗನು ಸಮರ್ಥನಿದ್ದನೋ? ಪ್ರಯಾಣವೂ
ಈ ಕಾದಂಬರಿ ಎನ್ನಲಾಗದ ಪುಸ್ತಕಕ್ಕೆ ಇತರ ಯಾವುದೇ ಲೇಖಕರ ಮುನ್ನುಡಿ ಇಲ್ಲ. ಸ್ವತಃ ಲೇಖಕರೇ, ಅಸಡ್ಡೆಯಿಂದಲೇನೋ ಎಂಬಂತೆ, ಇನ್ಯಾವುದೋ ಕಾದಂಬರಿಯ ತಾಲೀಮಿಗೆಂದು ಬರೆದ ಕಥೆ ಇದು ಎಂದು ಹೇಳಿ, ನಿಮಗಿಷ್ಟವಾಗದಿದ್ದಲ್ಲಿ ನನ್ನ ಹೊಣೆ ಅಲ್ಲ ಎಂಬಂತೆ ಕೈತೊಳೆದುಕೊಂಡಂತಿದೆ. ಇದು
ಚಿಕ್ಕಂದಿನಲ್ಲಿ, ನಮ್ಮ ದೇಶದ ಬಗ್ಗೆ ಅಭಿಮಾನ ಮೂಡಿಸುವ ಪಾಠಗಳ ಅಧ್ಯಾಯಗಳಲ್ಲಿ, ನಮ್ಮ ದೇಶ ಬೇರೆ ದೇಶಗಳಿಗಿಂತ ಏಕೆ ವಿಭಿನ್ನ ಎಂಬ ವಿಷಯ ಬಂದಾಗ ಮೊದಲು ಬಿಂಬಿಸುತ್ತಿದ್ದ ವಿಚಾರವೆಂದರೆ, ನಮ್ಮಲ್ಲಿರುವ ವೈವಿಧ್ಯತೆಗಳ ನಡುವೆಯೂ ದೇಶ ಏಕತೆಯಿಂದ ಹೇಗೆ ಮುನ್ನಡೆಯುತ್ತಿದೆ ಎಂಬುವುದು.
ಬೆಳಿಗ್ಗೆ ಬೇಗನೆ ಎಚ್ಚರವಾಯಿತು. ಸುಮ್ಮನೆ ಹೊರಗೆ ಬಂದು ಕೂತವನಿಗೆ, ಎದುರಿನ ಕಟ್ಟಡದಲ್ಲಿ ಒಂದು ಪಾರಿವಾಳ ತೋರಿತು. ಒಂದಷ್ಟು ಹೊತ್ತು ಸುಮ್ಮನೆ ದಿಗಂತದೆಡೆ ದಿಟ್ಟಿಸುತ್ತಾ, ಮರುಕ್ಷಣ ಆತಂಕದಿಂದ ಎಂಬಂತೆ ಆಚೆ ಈಚೆ ತಿರುಗಾಡುತ್ತಾ, ಮತ್ತೆ ಏನೋ ನೆನಪಾದಂತೆ ಆಲೋಚಿಸುತ್ತಾ, ತನ್ನ
ಹೊಸ ಮನೆ ಖರೀದಿಸುವಾಗ, ಮನೆಯ ನೆಲಕ್ಕೆ ಹಾಸಿರುವ ಬಿಲ್ಲೆಯನ್ನು (tiles) ಪರೀಕ್ಷಿಸುವ ಸಲುವಾಗಿ, ಅಲ್ಲಲ್ಲಿ ಹದವಾಗಿ ಕುಟ್ಟಿ ಪರೀಕ್ಷೆ ಮಾಡಬೇಕಾಗುತ್ತದೆ. ಯಾವ ಭಾಗದಲ್ಲಿ ಸರಿಯಾಗಿ ಕಾಂಕ್ರೀಟ್ ತುಂಬಿ ಬಿಲ್ಲೆಯನ್ನು ಕೂಡಿಸಿರುವುದಿಲ್ಲವೋ, ಆ ಜಾಗ ಟೊಳ್ಳು ಶಬ್ದ ಮಾಡುತ್ತಿರುತ್ತದೆ. ಟೊಳ್ಳು
ಸುಮಾರು ೭ ವರುಷಗಳ ನಂತರ ‘ತಿಥಿ’ ಚಲನಚಿತ್ರವನ್ನು ಮತ್ತೆ ನೋಡುವ ಮನಸ್ಸಾಯಿತು. ತುಂಬಾ ನೆನಪಿನಲ್ಲಿ ಉಳಿಯುವಂಥ, ಹಾಗು ಇನ್ನೂ ಇಷ್ಟವಾಗಿಯೇ ಉಳಿದಿರುವಂಥ ಬೆರಳೆಣಿಕೆಯಷ್ಟು ಸಿನೆಮಾಗಳಲ್ಲಿ ತಿಥಿ ಆಗ್ರ ಸ್ಥಾನದಲ್ಲಿಯೇ ನಿಲ್ಲುತ್ತದೆ. ಇದೇ ಕಾರಣಕ್ಕಾಗಿ ರಂಜನಿ ಜೊತೆ ಈ ಚಿತ್ರವನ್ನು