ಸುಮಾರು ೭ ವರುಷಗಳ ನಂತರ ‘ತಿಥಿ’ ಚಲನಚಿತ್ರವನ್ನು ಮತ್ತೆ ನೋಡುವ ಮನಸ್ಸಾಯಿತು. ತುಂಬಾ ನೆನಪಿನಲ್ಲಿ ಉಳಿಯುವಂಥ, ಹಾಗು ಇನ್ನೂ ಇಷ್ಟವಾಗಿಯೇ ಉಳಿದಿರುವಂಥ ಬೆರಳೆಣಿಕೆಯಷ್ಟು ಸಿನೆಮಾಗಳಲ್ಲಿ ತಿಥಿ ಆಗ್ರ ಸ್ಥಾನದಲ್ಲಿಯೇ ನಿಲ್ಲುತ್ತದೆ. ಇದೇ ಕಾರಣಕ್ಕಾಗಿ ರಂಜನಿ ಜೊತೆ ಈ ಚಿತ್ರವನ್ನು
ಮೊನ್ನೆ ಕನ್ನಡದ ಚಾರ್ಲಿ ಸಿನಿಮಾ ನೋಡಲು ಹೋಗಿದ್ದೆವು. ಪಕ್ಕದ ಸೀಟಿನಲ್ಲಿ ಒಬ್ಬ ಚಿಕ್ಕ ಹುಡುಗ ಕುಳಿತಿದ್ದ. ಚಿತ್ರದಲ್ಲಿ ನಾಯಿ ಹಿಮದ ರಾಶಿಯನ್ನು ಕಂಡು, ಅದರ ಮೇಲೆ ಕುಪ್ಪಳಿಸುವ ದೃಶ್ಯ ಬಂದ ಕೂಡಲೇ ಆತ ಅಪ್ಪನನ್ನುಕೇಳಿದ, “ಅಪ್ಪ, ಅದು ಫೇಕ್
ಮೊನ್ನೆ ಮೊನ್ನೆಯಷ್ಟೇ ನಾವೆಲ್ಲಾ ಸಂಭ್ರಮದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದೆವು. ಮನೆಯ ಹತ್ತಿರವೇ ಇದ್ದ ಪಾರ್ಕಿನಲ್ಲಿ ವಿಕಸಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೋದ ವರ್ಷ ಇದೇ ದಿನ ನೆಟ್ಟು, ನೀರು ಹಾಕುವವರಿಲ್ಲದೆ, ಕೆಲವೇ ದಿನಗಳಲ್ಲಿ ಕರಟಿ ಹೋದ ಸಸಿ
ಅಧ್ಯಾಯ ೨: ಮೂಲ – ಕಲಿಕಾರಂಭ ವಿದ್ಯೆ ನಿಜಕ್ಕೂ ನಮಗೆ ಕಲಿಸುವುದು ಹೆಚ್ಚೋ ಅಥವಾ ಕಸಿದುಕೊಳ್ಳುವುದು ಹೆಚ್ಚೋ?ಮಗು ಪ್ರಪಂಚವನ್ನು ಅಚ್ಚರಿಯಿಂದ ಏಕೆ ನೋಡುತ್ತದೆ? ಚಿಕ್ಕ ಚಿಕ್ಕ ವಿಷಯಗಳಲ್ಲಿ ಖುಷಿಯನ್ನು ಹೇಗೆ ಹುಡುಕುತ್ತದೆ? ಒಬ್ಬ ಸಂಗೀತ ವಿದ್ವಾಂಸ, ಇನ್ನೊಬ್ಬ ಸಾಮಾನ್ಯ
ನನ್ನ ಹೆಸರು ಅಚ್ಯುತ. ಬೆಳ್ಯಾಡಿಯ ಗೋಪಾಲಭಟ್ಟರ ಎರಡನೇ ಸುಪುತ್ರ. ಜೀವನ ಒಂದು ಮಹತ್ತರ ಘಟ್ಟದಲ್ಲಿ ಬಂದು ನಿಂತಿರುವಂತಹ ಸಮಯದಲ್ಲಿ, ನನಗೆ ನೆನಪಿರುವ ಮಟ್ಟಿಗೆ ನನ್ನ ಜೀವನದಲ್ಲಿ ಇದುವರೆಗೂ ನಡೆದಿರುವಂತಹ ದಾಖಲಾರ್ಹ ಘಟನೆಗಳನ್ನು ದಾಖಲಿಸುವ ಪ್ರಯತ್ನವಿದು. ಪ್ರಯೋಜನವೇನು? ನನಗೂ ಗೊತ್ತಿಲ್ಲ.
ಅಂತಿಮ ಅಧ್ಯಾಯ: ಅವನ ಹೆಸರು ಕೂಡ ನೆನಪಾಗುತ್ತಿಲ್ಲ. ಅಚ್ಯುತ ಇರಬೇಕು. ನಮ್ಮೂರು ಬೆಳ್ಯಾಡಿಯ ಗೋಪಿ ಭಟ್ಟರ ಮಗ. ಚಿಕ್ಕಂದಿನಲ್ಲಿ ಒಮ್ಮೆ ಯಾರದ್ದೋ ತಿಥಿಯಲ್ಲಿ ಜೊತೆಗೆ ಆಟವಾಡಿ ಅಂದಿನ ದಿನಕ್ಕೇ ಮರೆತು ಹೋಗಿದ್ದ ಗೋವಿಂದನ ತಮ್ಮ, ಅಚ್ಯುತ. ಅಂದು ಬೆಳಗ್ಗೆ
ಸುಡುವ ಬಿಸಿಲಿನ ಧಗೆಗೆ ನೆಲವೆಲ್ಲ ಸುಟ್ಟು, ಸಮುದ್ರದ ಉಪ್ಪು ನೀರೆಲ್ಲ ಮೈ ಸೇರಿದೆಯೇನೋ ಎನ್ನುವ ಸಂದೇಹ ಬರುವಂತೆ ಮೈಯಿಂದ ಬೆವರು ಸುರಿಯುತ್ತಿರಬೇಕಾದರೆ, ಯಾವಾಗಾದರೂ ಮಳೆರಾಯ ಧರೆಗಿಳಿಯುತ್ತಾನೋ ಎಂಬ ಕಾತರ, ಉಕ್ಕಿ ಹರಿಯುವ ಕೆಂಪು ನದಿಗಳು ಸಮುದ್ರವನ್ನು ಬಂದು ಸೇರುವುದನ್ನು
38 ವರುಷಗಳ ಕಾಲ ತಾಳ್ಮೆಯಿಂದ ಕಾದು, ಹಿರಿಯ ಅಣ್ಣಂದಿರೆಲ್ಲ ಕಾಲದಲ್ಲಿ ಕಳೆದು ಹೋದ ಮೇಲೆ ಜನರಿಂದಲೇ ಆಯ್ಕೆಯಾಗಿ ಆತ ಅಧಿಕಾರಕ್ಕೆ ಬಂದ. ಅಧಿಕಾರಕ್ಕೆ ಬಂದ ಮೊದಲೆಂಟು ವರ್ಷ ಶಿಸ್ತಿನಿಂದ ಯೋಜನೆ ಮಾಡಿ ಪದಾತಿ ಪಡೆ, ಅಶ್ವ ದಳ, ಗಜ
ದಿನಾ ನಾನು ಹೋಗುವ ದಾರಿಯಲ್ಲಿ, ಪೇಟೆ ಪರಿಮಿತಿಯಿಂದ ಹೊರಗಿರುವ, ಇನ್ನಷ್ಟು ಜನರನ್ನು ತನ್ನೊಳಗೆ ನುಂಗಿ ಬಚ್ಚಿಡಿಸಿಕೊಳ್ಳಬಲ್ಲಂತಹ ಹೊಸ ವಸತಿ ಸಮುಚ್ಚಯವನ್ನು ಕಟ್ಟುವ ಕೂಲಿ ಕಾರ್ಮಿಕರ ಮಕ್ಕಳು ತಿಂದು, ಮಲಗಿ, ಹೇತುವ ಆ ಇಕ್ಕಟ್ಟಾದ ದಾರಿ ಬದಿಯ ಖಾಲಿ ಜಾಗವನ್ನು
ಮುಂದಿನ ನಡೆದ ಘಟನೆಗಳು ದುಗ್ಗಿಗೆ ಕನಸೇನೋ ಎಂಬಂತೆ ನಡೆದು ಹೋದವು. ಕೋಲ ನಡೆದ ಮರುದಿನ ಬೆಳಗ್ಗೆಯೇ ಬೆಳ್ಯಾಡಿಯ ಬ್ರಾಹ್ಮಣೇತರ ವರ್ಗದ ಪ್ರಮುಖರೆಲ್ಲ ಶಂಭು ಶೆಟ್ಟರ ನೇತೃತ್ವದಲ್ಲಿ ದುಗ್ಗಿಯ ಮನೆ ಮುಂದೆ ಹಾಜರಾದರು. ಹೇಗೆ ಬೆಳ್ಯಾಡಿಗೆ ಸಿರಿ ದೇವತೆಯ ಗುಡಿಯ