ದಿನಾ ನಾನು ಹೋಗುವ ದಾರಿಯಲ್ಲಿ, ಪೇಟೆ ಪರಿಮಿತಿಯಿಂದ ಹೊರಗಿರುವ, ಇನ್ನಷ್ಟು ಜನರನ್ನು ತನ್ನೊಳಗೆ ನುಂಗಿ ಬಚ್ಚಿಡಿಸಿಕೊಳ್ಳಬಲ್ಲಂತಹ ಹೊಸ ವಸತಿ ಸಮುಚ್ಚಯವನ್ನು ಕಟ್ಟುವ ಕೂಲಿ ಕಾರ್ಮಿಕರ ಮಕ್ಕಳು ತಿಂದು, ಮಲಗಿ, ಹೇತುವ ಆ ಇಕ್ಕಟ್ಟಾದ ದಾರಿ ಬದಿಯ ಖಾಲಿ ಜಾಗವನ್ನು
ಮುಂದಿನ ನಡೆದ ಘಟನೆಗಳು ದುಗ್ಗಿಗೆ ಕನಸೇನೋ ಎಂಬಂತೆ ನಡೆದು ಹೋದವು. ಕೋಲ ನಡೆದ ಮರುದಿನ ಬೆಳಗ್ಗೆಯೇ ಬೆಳ್ಯಾಡಿಯ ಬ್ರಾಹ್ಮಣೇತರ ವರ್ಗದ ಪ್ರಮುಖರೆಲ್ಲ ಶಂಭು ಶೆಟ್ಟರ ನೇತೃತ್ವದಲ್ಲಿ ದುಗ್ಗಿಯ ಮನೆ ಮುಂದೆ ಹಾಜರಾದರು. ಹೇಗೆ ಬೆಳ್ಯಾಡಿಗೆ ಸಿರಿ ದೇವತೆಯ ಗುಡಿಯ
ಸುಮಾರು ೧೫ ಕಿಲೋ ಮೀಟರಿನಷ್ಟು ವಿಶಾಲವಾಗಿ ಹಬ್ಬಿರುವ ಬೆಳ್ಯಾಡಿಯ ಜನಸಂಖ್ಯೆ ಹೇಳಿಕೊಳ್ಳುವಷ್ಟಿಲ್ಲವಾದರೂ, ಇರುವ ಕೆಲವೇ ಮನೆಗಳ ಜನ ಸಮೂಹ, ಹಲವು ವರ್ಗಗಳಾಗಿ ವಿಂಗಡಣೆಗೊಂಡಿವೆ. ಮೇಲಿಂದ ನೋಡಿದಾಗ ತೋರುವುದು ಒಂದು ಊರಿನ ಜನಸಂಖ್ಯೆಯ ಬಹುಪಾಲನ್ನು ಹಂಚಿಕೊಂಡಿರುವ ಬ್ರಾಹ್ಮಣ ವರ್ಗ, ಇನ್ನೊಂದು
“ಗೀತಕ್ಕ… ಹೋಯ್ ಗೀತಕ್ಕ..” ಪೋಸ್ಟ್ ಮ್ಯಾನ್ ನಂಜಪ್ಪ ಕೂಗಿದಾಗ ಗೀತಕ್ಕ ಮನೆಯ ಟೆರೇಸ್ ಮೇಲೆ ಉರಿ ಬಿಸಿಲಿಗೆ ಶಪಿಸುತ್ತಾ ಒಗೆದ ಬಟ್ಟೆ ಒಣಗಿಸುತ್ತಿದ್ದರು. ನಂಜಪ್ಪನ ಧ್ವನಿ ಕೇಳಿ ನಿಧಾನಕ್ಕೆ ಒಂದೊಂದೇ ಮೆಟ್ಟಿಲಿಳಿಯುತ್ತಾ, ಬಂದೆ ಬಂದೆ ಎಂದು ತಾನು ಕೂಡ
“ಸಿದ್ಧಾರ್ಥ” ಹೆಸರಿನ ಅರ್ಥ ‘ತನ್ನ ಗುರಿ ಸಾಧಿಸುವವನು’. ಬುದ್ಧ, ಬುದ್ಧನಾಗುವ ಮೊದಲಿನ ಹೆಸರು. ಅಂದು ಆತನ ತಂದೆ ತಾಯಿಗಿದ್ದ ಆಸೆಯೂ ಅದೇ. ತಮ್ಮ ಪುತ್ರ ಆತನ ಗುರಿ ಸಾಧಿಸಲಿ ಎಂದು. ರಾಜ ಆರೈಕೆಯಲ್ಲಿ ಬೆಳೆದ ಬಾಲಕ ಒಂದು ದಿನ
“ಕಿಟಕಿಯಿಂದಾಚೆ ಕಣ್ಣು ಹಾಯಿಸಿದಷ್ಟು ದೂರಕ್ಕೂ ಕರಿ ಕಪ್ಪಾದ ಅಮಾವಾಸ್ಯೆಯ ರಾತ್ರಿ. ಕಠೋರವಾದ ಕತ್ತಲು, ಅಪ್ಪನ ಮನಸ್ಸಿನ ತರಹವೇ. ಎಷ್ಟೋ ಸಲ ಅನ್ನಿಸಿದ್ದಿದೆ, ಅಪ್ಪ ದಿನಾಲು ಪೂಜೆ ಮಾಡುವ ಬೆಳ್ಯಾಡಿ ವಿಷ್ಣುಮೂರ್ತಿ ದೇವಸ್ಥಾನದ ದೇವರ ಕಲ್ಲಾದರೂ ಎಂದಾದರು ಒಲಿದೀತು ಆದರೆ
ಈ ಮಳೆಗೂ ನಾನು ಹೊರಡುವ ಸಮಯಕ್ಕೂ ಏನೋ ಅವಿನಾಭಾವ ಸಂಬಂಧವಂತೂ ಖಂಡಿತ ಇದೆ. ಶಾಲೆಗೆ ಹೋಗುವ ಸಮಯದಿಂದ ಹಿಡಿದು ಇಂದಿನ ತನಕವೂ ಅದು ತಪ್ಪಿಲ್ಲ. ಮಳೆಗಾಲದಲ್ಲಿ ಇಡೀ ದಿನ ಬಿಸಿಲಿದ್ದರೂ ಶಾಲೆ ಬಿಟ್ಟು ಮನೆಗೆ ಹೋಗುವ ಸಮಯಕ್ಕೆ ಸರಿಯಾಗಿ
ಮೆದುವಾದ ಸೀಟುಗಳು, ತಂಪಾದ ಗಾಳಿ, ಹೊರಗಿನ ಪ್ರಪಂಚದ ಎಲ್ಲಾ ಸದ್ದುಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸಿ ತನ್ನದೇ ಬೇರೆಯೇ ದೃಷ್ಟಿಯಿಂದ ಹೊರ ಲೋಕವನ್ನು ನೋಡುವಂತೆ ಮಾಡುವ ಬೆಂಗಳೂರಿನ ಈ ವೋಲ್ವೋ ಬಸ್, ಖಂಡಿತವಾಗಿಯೂ ಬಡವರ ಪ್ರಯಾಣಕ್ಕೆಂದು ಅಲ್ಲ. ಇದರೊಳಗೆ ಕೂತಾಗ ಹೊರಗಿನ
ರೆಪ್ಪೆಗಳ ಮಧ್ಯದಿಂದ ಬೆಳಕು ನುಸುಳಿದಂತಾಗಿ ಮತ್ತೆ ಪ್ರಜ್ಞೆ ಬಂದಾಗ ಆಕೆಗೆ ತೋರುವುದು ಯಾವುದೋ ತಿಳಿದಿರದ ಹಳೆ ಮನೆಯ ಚಾವಡಿ, ಚಾವಡಿಯ ಕಂಬಕ್ಕೆ ಕಟ್ಟಿಹಾಕಿರುವ ತನ್ನ ಎರಡು ಕೈಗಳು, ಅದೇ ಚಾವಡಿಯ ಒಂದು ಬದಿಯಲ್ಲಿರುವ ಬೃಹದಾಕಾರಾದ ಕನ್ನಡಿ, ಕನ್ನಡಿಯ ಮುಂದೆ
ಈ ಬಾರಿ ಬೆಳ್ಯಾಡಿಯ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವಕ್ಕೆ ವಿಶೇಷ ಸಂಭ್ರಮ. ಕಾರಣ ಇಂದಿನ ಬಾರಿಯ ಯಕ್ಷಗಾನ ವಿಶೇಷವಾಗಿ ಪಂಜಿನ ಬೆಳಕಿನಲ್ಲೇ ನಡೆಸುವುದೆಂದು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಮೇಳದವರು ನಿರ್ಧರಿಸಿರುವುದು. ಈ ಮೂಲಕ ದೇವಸ್ಥಾನಕ್ಕೆ ಪ್ರಚಾರ ಒದಗಿಸುವುದು ಹಾಗೂ