ಚಿಕ್ಕಂದಿನಲ್ಲಿ, ನಮ್ಮ ದೇಶದ ಬಗ್ಗೆ ಅಭಿಮಾನ ಮೂಡಿಸುವ ಪಾಠಗಳ ಅಧ್ಯಾಯಗಳಲ್ಲಿ, ನಮ್ಮ ದೇಶ ಬೇರೆ ದೇಶಗಳಿಗಿಂತ ಏಕೆ ವಿಭಿನ್ನ ಎಂಬ ವಿಷಯ ಬಂದಾಗ ಮೊದಲು ಬಿಂಬಿಸುತ್ತಿದ್ದ ವಿಚಾರವೆಂದರೆ, ನಮ್ಮಲ್ಲಿರುವ ವೈವಿಧ್ಯತೆಗಳ ನಡುವೆಯೂ ದೇಶ ಏಕತೆಯಿಂದ ಹೇಗೆ ಮುನ್ನಡೆಯುತ್ತಿದೆ ಎಂಬುವುದು.
ಬೆಳಿಗ್ಗೆ ಬೇಗನೆ ಎಚ್ಚರವಾಯಿತು. ಸುಮ್ಮನೆ ಹೊರಗೆ ಬಂದು ಕೂತವನಿಗೆ, ಎದುರಿನ ಕಟ್ಟಡದಲ್ಲಿ ಒಂದು ಪಾರಿವಾಳ ತೋರಿತು. ಒಂದಷ್ಟು ಹೊತ್ತು ಸುಮ್ಮನೆ ದಿಗಂತದೆಡೆ ದಿಟ್ಟಿಸುತ್ತಾ, ಮರುಕ್ಷಣ ಆತಂಕದಿಂದ ಎಂಬಂತೆ ಆಚೆ ಈಚೆ ತಿರುಗಾಡುತ್ತಾ, ಮತ್ತೆ ಏನೋ ನೆನಪಾದಂತೆ ಆಲೋಚಿಸುತ್ತಾ, ತನ್ನ
ಹೊಸ ಮನೆ ಖರೀದಿಸುವಾಗ, ಮನೆಯ ನೆಲಕ್ಕೆ ಹಾಸಿರುವ ಬಿಲ್ಲೆಯನ್ನು (tiles) ಪರೀಕ್ಷಿಸುವ ಸಲುವಾಗಿ, ಅಲ್ಲಲ್ಲಿ ಹದವಾಗಿ ಕುಟ್ಟಿ ಪರೀಕ್ಷೆ ಮಾಡಬೇಕಾಗುತ್ತದೆ. ಯಾವ ಭಾಗದಲ್ಲಿ ಸರಿಯಾಗಿ ಕಾಂಕ್ರೀಟ್ ತುಂಬಿ ಬಿಲ್ಲೆಯನ್ನು ಕೂಡಿಸಿರುವುದಿಲ್ಲವೋ, ಆ ಜಾಗ ಟೊಳ್ಳು ಶಬ್ದ ಮಾಡುತ್ತಿರುತ್ತದೆ. ಟೊಳ್ಳು
ಸುಮಾರು ೭ ವರುಷಗಳ ನಂತರ ‘ತಿಥಿ’ ಚಲನಚಿತ್ರವನ್ನು ಮತ್ತೆ ನೋಡುವ ಮನಸ್ಸಾಯಿತು. ತುಂಬಾ ನೆನಪಿನಲ್ಲಿ ಉಳಿಯುವಂಥ, ಹಾಗು ಇನ್ನೂ ಇಷ್ಟವಾಗಿಯೇ ಉಳಿದಿರುವಂಥ ಬೆರಳೆಣಿಕೆಯಷ್ಟು ಸಿನೆಮಾಗಳಲ್ಲಿ ತಿಥಿ ಆಗ್ರ ಸ್ಥಾನದಲ್ಲಿಯೇ ನಿಲ್ಲುತ್ತದೆ. ಇದೇ ಕಾರಣಕ್ಕಾಗಿ ರಂಜನಿ ಜೊತೆ ಈ ಚಿತ್ರವನ್ನು
ಮೊನ್ನೆ ಮೊನ್ನೆಯಷ್ಟೇ ನಾವೆಲ್ಲಾ ಸಂಭ್ರಮದಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದೆವು. ಮನೆಯ ಹತ್ತಿರವೇ ಇದ್ದ ಪಾರ್ಕಿನಲ್ಲಿ ವಿಕಸಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೋದ ವರ್ಷ ಇದೇ ದಿನ ನೆಟ್ಟು, ನೀರು ಹಾಕುವವರಿಲ್ಲದೆ, ಕೆಲವೇ ದಿನಗಳಲ್ಲಿ ಕರಟಿ ಹೋದ ಸಸಿ
ಸುಮಾರಕ್ಕೆ ೧೯೪೬ ಮತ್ತು ೧೯೬೪ ನಡುವೆ ಪಾಶ್ಚಿಮಾತ್ಯ ದೇಶಗಳಲ್ಲಿ ಜನಿಸಿದ ತಲೆಮಾರಿಗೆ, ಇರುವ ಹೆಸರು ‘ಬೇಬಿ ಬೂಮರ್ಸ್ ‘. ೨ನೇ ಮಹಾಯುದ್ಧ ಮುಗಿಯುತ್ತಲೇ ಒಮ್ಮೆಲೇ ಮಕ್ಕಳ ಜನನ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡು ಬಂದದ್ದೇ, ಆ ತಲೆಮಾರಿಗೆ ಇಂಥ
“ನಮಸ್ಕಾರ ಫ್ರೆಂಡ್ಸ್. ನೀವು ಈಗ ನೋಡ್ತಾ ಇದ್ದೀರಾ ಬಿಜಾಪುರದ ಗೋಲಗುಂಬಜ್…”ಆತ ಇತ್ತೀಚೆಗಷ್ಟೇ ಪ್ರಸಿದ್ಧಿ ಪಡೆಯುತ್ತಿರುವ ಒಬ್ಬ youtuber ಪ್ರವಾಸಿಗ. ಆತ ತನ್ನ ಚಾನೆಲ್ ನ ವೀಕ್ಷಕರಿಗೆ ಜಾಗಗಳನ್ನು ತೋರಿಸುವ ಪಡುವ ಶ್ರಮ ಅಷ್ಟಿಷ್ಟಲ್ಲ. ತಾನು ಮಾಡುತ್ತಿರುವುದು ಸಮಾಜ ಸೇವೆಯ
ಸಾಮಾನ್ಯವಾಗಿ ಕರಾವಳಿಯ ಯಕ್ಷಗಾನದ ಮೇಳಗಳು ವರ್ಷವಿಡೀ ಸುತ್ತಾಟ ನಡೆಸಿ ಸುಸ್ತಾಗಿ ಮಳೆಗಾಲದ ಸಮಯದಲ್ಲಿ ವಿರಾಮಕ್ಕಾಗಿ ಹಾಗು ಹೆಚ್ಚಿನ ಕಲಾಕಾರರು ರೈತರೂ ಕೂಡ ಆಗಿರುವುದರಿಂದ, ಬೇಸಾಯ ಮಾಡುವ ಸಲುವಾಗಿ ಮಳೆಗಾಲದ ಸಮಯದಲ್ಲಿ ಯಾವುದೇ ಯಕ್ಷಗಾನ ಪ್ರದರ್ಶನಗಳು ನಡೆಯುವುದಿಲ್ಲ. ಆದರೆ ಕೆಲ
(ಸೆಪ್ಟೆಂಬರ್ 7, 2016 ರಂದು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡ ಪಿ . ಕುಸುಮಾ ಆಯರಹಳ್ಳಿ ಅವರ ‘ಕ್ರಾಸ್ ಕನೆಕ್ಷನ್’ ಅಂಕಣದ ಬರಹದ ಪ್ರತಿಯಾಗಿ ನನ್ನ ಅನಿಸಿಕೆ.) ಆಧುನಿಕತೆಯ ಗಾಳಿ ನಿಧಾನಕ್ಕೆ ದೇಶದ ಮೂಲೆ ಮೂಲೆಯನ್ನು ತಲುಪುತ್ತಿರುವ ಸಮಯದಲ್ಲಿ ಎಲ್ಲಿ
ನಮ್ಮೆಲ್ಲರ ಮೆಚ್ಚಿನ ಲೇಖಕ ಜೋಗಿಯವರು ಹೀಗೊಂದು ಪ್ರಶ್ನೆಯನ್ನು ಸಾಮಾಜಿಕ ಜಾಲದಲ್ಲಿ ಹರಿ ಬಿಟ್ಟಿದ್ದಾರೆ. “ಕನ್ನಡ ಚಿತ್ರಗಳಿಗೆ ನಿಜಕ್ಕೂ ಚೈತ್ರಕಾಲ ಬಂದಿದೆಯಾ? ಬಂದಿದ್ದರೆ ಕಾರಣ ಏನು? ಹೀರೋಯಿಸಮ್ಮು ಕಡಿಮೆಯಾಗಿ ಅರ್ಥಪೂರ್ಣ ಚಿತ್ರಗಳು ಜಾಸ್ತಿ ಆಗಿರುವುದೇ? ಹೊಸ ತಲೆಮಾರು ಬಂದಿರುವುದೇ?” ಇದರ